ಧರ್ಮದ ಬಗ್ಗೆ ಸಂಭಾಷಣೆ
ಯೆಶೋದಾ ಕರುತುರಿ
ಮಾರ್ಚ್ ೨೩,೨೦೨೦
ಇಂದಿನ ಶ್ಲೋಕವು ಭಗವದ್ಗೀತೆಯಿಂದ, ಭಗವಂತ ಕೃಷ್ಣನು ಹೇಳಿದಾಗ,
यदा यदा हि धर्मस्य ग्लानिर्भवति भारत |
अभ्युत्थानमधर्मस्य तदात्मानं || 4.7 ||
ಸದಾಚಾರದಲ್ಲಿ ಅವನತಿ ಮತ್ತು ಅನ್ಯಾಯದ ಹೆಚ್ಚಳ ಬಂದಾಗಲೆಲ್ಲಾ, ಓ ಅರ್ಜುನ, ನಾನು ಆ ಸಮಯದಲ್ಲಿ ಭೂಮಿಯ ಮೇಲೆ ಪ್ರಕಟಗೊಳ್ಳುತ್ತೇನೆ.
ದೈವವು ನಮ್ಮ ಜೀವನದುದ್ದಕ್ಕೂ ಅನೇಕ ರೂಪಗಳಲ್ಲಿ ಬರುತ್ತದೆ, ಅದು ವಿಗ್ರಹದ ಮೂಲಕ, ಗುರುವಿನ ಮೂಲಕ, ಧರ್ಮದ ಮೂಲಕ ಆಗಿರಬಹುದು. ಆದರೆ ಪ್ರತಿ ಸಂಬಂಧ, ಪ್ರತಿ ಸನ್ನಿವೇಶ ಮತ್ತು ನಾವು ಪರಸ್ಪರ ಸಂಭಾಷಣೆ ನಡೆಸುವ ಪ್ರತಿಯೊಬ್ಬ ವ್ಯಕ್ತಿಯ ಮೂಲಕವೂ ಬರುತ್ತದೆ, ಅಲ್ಲಿ ನಮ್ಮ ಅತ್ಯಂತ ದೈವಿಕ ಸ್ವಭಾವದವರಾಗಿರಲು, ಅಧರ್ಮದ ಬದಲು ಧರ್ಮವನ್ನು ಆರಿಸಿಕೊಳ್ಳಲು ನಮಗೆ ಅವಕಾಶ ನೀಡಲಾಗುತ್ತದೆ.
ಈ ಆಯ್ಕೆಯನ್ನು ಮಾಡಲು ನಮಗೆ ಸಾಧ್ಯವಾಗದಿದ್ದಾಗ, ಸರಿಯಾದುದ್ದೇನು ಎಂದು ನಿರ್ಧರಿಸಲು ನಾವು ಆಂತರಿಕ ಯುದ್ಧದಲ್ಲಿ ಹೋರಾಡುವ ಪ್ರತಿ ಕ್ಷಣದಲ್ಲಿಯೂ, ದೈವಿಕತೆಯು ಚಿಂತನೆಯ ಸ್ಪಷ್ಟತೆಯ ಕಡೆಗೆ ನಮಗೆ ಮಾರ್ಗದರ್ಶನ ನೀಡುತ್ತದೆ ಆದರೆ ಕೇಳುವುದು ನಮ್ಮ ಆಯ್ಕೆಯಾಗಿದೆ.
ಆದುದರಿಂದ ನೀವು ಇಂದು ನಿಮ್ಮ ಪ್ರಾರ್ಥನೆಯಲ್ಲಿ ಹೂವುಗಳನ್ನು ಅರ್ಪಿಸಿದಾಗ, ಯಾವಾಗಲೂ ಧರ್ಮಕ್ಕಾಗಿ ಮತ್ತು ಸರಿಯಾದುದ್ದಕ್ಕಾಗಿ ನಿಲ್ಲಲು ನಿಮ್ಮೊಳಗಿನ ಆಂತರಿಕ ಶಕ್ತಿಯನ್ನು ನಿರ್ದೇಶನ ಮಾಡಿ,ಆ ಕಾರ್ಯವನ್ನು ಪೋರ್ನಗೊಳಿಸಲು ಆ ದೈವಿಕತೆಯೇ ನಮ್ಮ ಮೂಲಕ ಪ್ರಕಟವಾಗುತ್ತದೆ.
Use left/right arrows to navigate the slideshow or swipe left/right if using a mobile device