ನೌಕರರ ನೆಲೆಬೆಳಕು: ಕಲಾವತಿ – Rosebazaar India

Watch us on Shark Tank!

ನೌಕರರ ನೆಲೆಬೆಳಕು: ಕಲಾವತಿ

                             

ನೌಕರರ ನೆಲೆಬೆಳಕು: ಕಲಾವತಿ

                                                                                       ಅನುಷಾ ಎನ್ ಡಿಸೆಂಬರ್ ೨೩,೨೦೧೯

ಕಲಾವತಿಗೆ ಒಂದು ನಗುವಿದೆ, ಅದನ್ನು ನಿರ್ಲಕ್ಷಿಸುವುದು ಅಸಾಧ್ಯ - ನೀವು ಕಚೇರಿಗೆ ಕಾಲಿಡುವಾಗಲೆ, ಅವಳು ಕೆಲಸದಲ್ಲಿ ನಿರತರಾಗಿರುವುದು ಕಾಣಬಹುದು, ಅವಳ ಕೂದಲಿಗೆ ಸುಂದರವಾದ ಹೂವು ಇರುತ್ತದೆ. ಈ ಲೇಖನಿಯಲ್ಲಿ, ನಾವು ಅವರ ಕಥೆಯನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತೇವೆ, ನಮ್ಮ ಪವರ್‌ಹೌಸ್ ಮಹಿಳೆಯ ಒಂದು ಕಿರುನೋಟ!

                                           

ಹಿಂದೂಪುರದಲ್ಲಿ ಬೆಳೆದ ಕಲಾವತಿ, ಮದುವೆಯಾದ ನಂತರ ಯಲಹಂಕಕ್ಕೆ ತೆರಳಿದರು. ೧೭ ಮತ್ತು ೧೨ ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳ ತಾಯಿ. ರೋಸ್ ಬಜಾರ್‌ಗೆ ಸೇರುವ ಮುನ್ನ, ರಾಧಾಳಂತೆ (ಇನ್ನೊಬ್ಬ ಪೂಜಾ ಮಹಿಳೆ) , ಕಲಾವತಿಯೂ ಉಡುಪು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಎರಡು ವರ್ಷ ಕೆಲಸ ಮಾಡಿದ ನಂತರ ಕಲಾವತಿ, ಆ ಕೆಲಸದ ವಾತಾವರಣ ತನಗೆ ಸೂಕ್ತವಲ್ಲ ಎಂದು ನಿರ್ಧರಿಸಿದಳು.

ವನಜಾ (ನಮ್ಮ ಮೊದಲ ಹೂವಿನ ಮಹಿಳೆ) ಕಲಾವತಿಗೆ ರೋಸ್ ಬಜಾರ್‌ನಲ್ಲಿ ಕೆಲಸ ಮಾಡುವ ಬಗ್ಗೆ ಹೇಳಿದರು. ಹೂವುಗಳನ್ನು ಕಟ್ಟುವ ಮತ್ತು ಹೂಮಾಲೆ ತಯಾರಿಸುವ ಕೆಲಸದ ಬಗ್ಗೆ ಅವಳು ಕೇಳಿದಾಗ, ಕಲಾವತಿ ಈ ಸ್ಥಾನವನ್ನು ಪರಿಗಣಿಸಿ ಏಪ್ರಿಲ್ ಕೊನೆಯಲ್ಲಿ ರೋಸ್ ಬಜಾರ್‌ಗೆ ಸೇರಿದಳು.

                                       

ರೋಸ್ ಬಜಾರ್ನಲ್ಲಿ ಜನರಲ್ಲಿದ್ದ ಒಡನಾಡಿತನ ಎಂದರೆ ಕಲಾವತಿಗೆ ಇಷ್ಟ. "ಕೆಲಸವು ಕೆಲಸದಂತೆ ಅನಿಸುವುದಿಲ್ಲ" ಎಂದು  ಹೇಳುತ್ತಾಳೆ. ಕಲಾವತಿ ಮೊದಲು ಸೇರಿದಾಗ ಹೂ ಕಟ್ಟುವುದು ಹೇಗೆ ಎಂಬುದರ ಬಗ್ಗೆ ಅವಳು ತಿಳಿದಿರಲಿಲ್ಲ, ಹಾರವನ್ನು ತಯಾರಿಸುವ ಮೂಲಭೂತ ಅಂಶಗಳನ್ನು ಮಾತ್ರ ಅವಳು ತಿಳಿದಿದ್ದಳು. ರೋಸ್ ಬಜಾರ್‌ಗೆ ಸೇರಿದ ನಂತರವೇ ಅವಳು ವೈವಿಧ್ಯಮಯ ಹೂಮಾಲೆಗಳನ್ನು ತಯಾರಿಸಲು ಕಲಿತಳು, “ಕೆಲಸ ಉತ್ತಮವಾಗಿದೆ.” ಎಂದು ನುಡಿದರು. ಕಲಾವತಿ ಈಗ ಹಾರವನ್ನು ತಯಾರಿಸುವ ಕಲೆಯಲ್ಲಿ ಇತರ ಮಹಿಳೆಯರಿಗೆ ತರಬೇತಿ ನೀಡುತ್ತಾರೆ.

                                    

ರೋಸ್ ಬಜಾರ್‌ನಲ್ಲಿ ಕಲಾವತಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾಳೆ, ಹೂವುಗಳನ್ನು ಪಡೆಯಲು ಮಾರುಕಟ್ಟೆಗೆ ಹೋಗುವುದರಿಂದ ಹಿಡಿದು ಹೂವಿನ ಹಾರಗಳನ್ನು ತಯಾರಿಸುವುದು ಮತ್ತು ಕಟ್ಟುವುದರ ವರೆಗು. ಅವಳು ಇತ್ತೀಚೆಗೆ ಪರದೇಶದ ಮತ್ತು ಆಮದಿಸಿದ ಹೂವುಗಳನ್ನು ಖರೀದಿಸಲು ಪ್ರಾರಂಭಿಸಿದ್ದಾಳೆ - ಮಾರುಕಟ್ಟೆಗೆ ಹೆದರುತ್ತಿದ್ದಳು ಮೊದಲು ಸೇರಿದಾಗ, ಹಾಗಾಗಿ ಇದು ಒಂದು ದೊಡ್ಡ ಹೆಜ್ಜೆ! ವಾಸ್ತವವಾಗಿ, ಕಾಲಾನಂತರದಲ್ಲಿ ಕಲಾವತಿ ಎಲ್ಲಾ ವಸ್ತುಗಳ ಸಂಗ್ರಹಣೆಯಲ್ಲಿ ಪರಿಣತರಾಗಿದ್ದಾರೆ ಮತ್ತು ಆಂಗ್ಲ ಭಾಷೆಯಲ್ಲಿ ಸಂಗ್ರಹಣೆ ಪಟ್ಟಿಯನ್ನು ಓದಲು ಮತ್ತು ಅತ್ಯುತ್ತಮ ತಾಜಾ ಹೂವುಗಳಿಗಾಗಿ ಚೌಕಾಶಿ ಮಾಡಲು ಕಲಿತಿದ್ದಾರೆ! ಕಲಾವತಿಯ ಪತಿ ರೋಸ್ ಬಜಾರ್‌ನೊಂದಿಗೆ ವಿತರಣೆ ಕಾರ್ಯಕರ್ತನಾಗಿ ಅರೆಕಾಲಿಕ ಕೆಲಸ ಮಾಡುತ್ತಾರೆ, ಮತ್ತು ಅವನು ಪಟ್ಟಣದಿಂದ ಹೊರಗಿರುವಾಗ ಕಾಲಾವತಿ ಹೆಜ್ಜೆ ಹಾಕುತ್ತಾಳೆ. ಒಟ್ಟಾರೆಯಾಗಿ, ಇದು ರೋಸ್ ಬಜಾರ್‌ನೊಂದಿಗೆ ಸ್ವಲ್ಪ ಕುಟುಂಬ ಸಂಬಂಧವಾಗಿದೆ!

                                             

ಅವಳು ಜನರೊಂದಿಗೆ ಬೆರೆಯುವ ಸ್ಥಳವನ್ನು ಕಂಡುಕೊಂಡಿದ್ದಕ್ಕಾಗಿ ಮತ್ತು ಅವಳು ಮಾಡುತ್ತಿರುವ ಕೆಲಸದ ಕಾರಣದಿಂದಾಗಿ ಅವಳ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಅವಳ ಕುಟುಂಬವು ಸಂತೋಷವಾಗಿದೆ.